Saturday, 25 May 2019

Old poetry in Kannada : On search, wait and longing

ಎದೆಯೊಳಗೆ  ನುಸುಳಿಕೊಂಡ ಮೋಹದ ಮಾಯೆ
ಪ್ರಾಣವಾಯುವಿನೊಂದಿಗೆ ಕಲೆತುಹೋಗಿ
ಒಂದೊಂದು ನಿಶ್ವಾಸಕೂ ಕಂಪಿಸುತಿಹುದು ಈ ಜೀವ.

ಚಿಂತೆಗಳ ಜಾಲದ ಎಳೆಗಳಲ್ಲೊಂದನೂ ಬಿಡದೆ ಕಾಡುವ ಗತಪುರುಷ;
ನಿನ್ನೆಯದು ಇಂದಿಗುಳಿಯದೆ ನೆನಪಾಗಿ ಕಾಡಿಸುವ ಕನಸುಗಳು;
ಜಿಜ್ಞಾಸೆ ಕೇಳುತಿಹುದು:
ಅನಿಕೇತನ, ನಿನ್ನ ಪರಿಚಯ ಹೇಳು.

ದೃಶ್ಯಬಿಂಬಗಳ ಭೇದವಿಲ್ಲದೆ ಮೂಡಿಸಿಕೊಂಬ ಕಣ್ಗಳಿಗೆ
ಅಗೋಚರ ಭಾವವೊಂದನು ಹುಡುಕುವ ತವಕ.
ಕಾಲನ ಸ್ತಬ್ಧನಾಗಿಸಿ, ಭೂಗೋಳವ ಸ್ವರ್ಗವಾಗಿಸಿ,
ಅಮೃತವರ್ಷಿಣಿಯಾಗಿ ತಾನೂ ವರ್ಷಿತಳಾಗುವ ತುಡಿತ.

No comments:

Post a Comment